Case story

Sharnappa


Sharnappa case story

ನಿನ್ನೆ ದಿನ ಸಂತೋಷ್ ಕಾಲೋನಿಯಲ್ಲಿ ರಾತ್ರಿ 8.30 ಕ್ಕೆ ಜೇವರ್ಗಿ ಹೋಗುವ ರಸ್ತೆ ಪಕ್ಕದಲ್ಲಿ ವಯೋ ವೃದ್ಧನೊಬ್ಬ ಅನಾರೋಗ್ಯದಿಂದ ನರಳುತ್ತಾ ಮಲಗಿದ್ದನು ಹೊರಗಡೆ ವಿಹಾರಕ್ಕೆಂದು ಬಂದಿದ್ದ ನಾವು ಈತನನ್ನು ನೋಡಿ ಮಾತನಾಡಿಸಿದಾಗ ತನಗೆ ಯಾರು ಇಲ್ಲ ಎಂದು ಮೂಕ ಸನ್ನೆ ಮೂಲಕ ತೊದಲುತ್ತಾ ಹೇಳಿದನು ಆರೋಗ್ಯದ ಸಮಸ್ಯೆ ವಿಚಾರಿಸಿದಾಗ ಹೊಟ್ಟೆ ನೋವು ಎಂದು ಅದು ಕೂಡ ಸನ್ನೆ ಮುಖಾಂತರವೇ ತಿಳಿಸಿದನು ವಿಚಾರವನ್ನು ನಮ್ಮ ನಿರ್ದೇಶಕರಿಗೆ ತಿಳಿಸಿದಾಗ 108 ಕಾಲ್ ಮಾಡು ಆಸ್ಪತ್ರೆಗೆ ಕಳುಹಿಸಿ ಎಂದು ಹೇಳಿದರು ನಾನು ಅವರ ಸಲಹೆಯಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆತನನ್ನು ಎಲ್ಲರನ್ನು ಹೇಳಿಕೇಳಿ ಅಲ್ಲೇ ಇರಲು ಬಿಟ್ಟು ಬಂದೇನು ಮರುದಿನ 10.30 ಕ್ಕೆ ಹೋಗಿ ಆತನನ್ನು ಸ್ವಲ್ಪ ಹುಡುಕಿ ಮಾರ್ಗದರ್ಶಿ ಸಂಸ್ಥೆ ಚರಿತಬಲ್ ಟ್ರಸ್ಟ್ ಹಿರಿಯರ ನೆಮ್ಮದಿ ಮನೆ ಆಶ್ರಯ ತಾಣದಲ್ಲಿ ಬಿಟ್ಟು ಬರಲಾಯಿತು